Breaking
25 Sep 2026, Fri

ಇರಿಯಣ್ಣಿ ಪರಿಸರದಲ್ಲಿ ಪಯ ಎಂಬಲ್ಲಿ ಚಿರತೆ ದಾಳಿಗೆ ನಾಯಿ ಸಾವು

ಕಾಸರಗೋಡು: ಜಿಲ್ಲೆಯ ಮುಳಿಯಾರುವಿನ ಇರಿಯಣ್ಣಿ ಪರಿಸರದಲ್ಲಿ ಪಯ ಎಂಬಲ್ಲಿ ನಿವೃತ್ತ ಅಧ್ಯಾಪಕ ಗಣಪತಿ ಭಟ್ಟ ಎಂಬವರ ಮನೆಯಂಗಳದಲ್ಲಿ ಮಲಗಿದ್ದ ಸಾಕು ನಾಯಿಯನ್ನು ಚಿರತೆ ಕೊಂದು ಹಾಕಿದೆ ಎಂದು ತಿಳಿದು ಬಂದಿದೆ.

ಸೋಮವಾರ ಮುಂಜಾನೆ 3 ಗಂಟೆಯ ವೇಳೆಗೆ ನಾಯಿಯ ಬೊಬ್ಬೆ ಕೇಳಿ ಗಣಪತಿ ಭಟ್ಟರು ಟಾರ್ಚ್ ಬೆಳಗಿದಾಗ ಚಿರತೆ ನಾಯಿಯನ್ನು ಕಚ್ಚಿ ಓಡುವುದು ಕಂಡು ಬಂದಿದೆ. ಕೂಡಲೇ ನೆರೆ ಮನೆಯವರನ್ನು ಕರೆದು ಹುಡುಕಿದಾಗ ನಾಯಿಯನ್ನು ಬಿಟ್ಟು ಚಿರತೆ ಪರಾರಿಯಾಯಿತು.

ಬಂದಡ್ಕ, ಮಾಣಿಮೂಲೆ ಸಹಿತ ವಿವಿದೆಡೆ ಚಿರತೆ ಭೀತಿಯಿದೆ. ಇದೀಗ ಇರಿಯಣ್ಣಿ ಬಳಿಯೂ ಕಂಡು ಬಂದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

Leave a Reply

Your email address will not be published. Required fields are marked *