Breaking
25 Sep 2026, Fri

ಉಳ್ಳಾಲದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ , ವ್ಯಕ್ತಿ ಸಾವು

ಉಳ್ಳಾಲ: ಪಾದಚಾರಿಯೋರ್ವರು ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅ.27 ರಂದು ನಡೆದಿದೆ.

ಸೋಮೇಶ್ವರ ಗ್ರಾಮದ ಪಿಲಾರು ಸರಕಾರಿ ಶಾಲಾ ಬಳಿಯ ನಿವಾಸಿ ರಾಮಚಂದ್ರ ಬಿ( 59 )ಮೃತಪಟ್ಟ ದುರ್ದೈವಿಯಾಗಿದ್ದಾರೆ. ರಾಮಚಂದ್ರ ಅವರು ಸೋಮವಾರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಓವರ್ ಬ್ರಿಡ್ಜ್ ಬಸ್ ಸ್ಟಾಪ್ ನಲ್ಲಿ ಉಳ್ಳಾಲದ ಬಸ್ಸಿನಿಂದ ಇಳಿದು ಹೆದ್ದಾರಿ ದಾಟುತ್ತಿದ್ದ ವೇಳೆ ಮಂಗಳೂರಿಗೆ ಧಾವಿಸುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದಿದೆ.

ಗಂಭೀರ ಗಾಯಗೊಂಡಿದ್ದ ರಾಮಚಂದ್ರ ಅವರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸುವ ವೇಳೆ ಮೃತಪಟ್ಟಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಅಪಘಾತ ನಡೆಸಿದ ಲಾರಿ ಮತ್ತು ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮೃತ ರಾಮಚಂದ್ರ ಅವರು ಈ ಹಿಂದೆ ಪ್ರತಿಷ್ಟಿತ ಫಿಲಿಪ್ಸ್ ಕಂಪನಿಯ ನುರಿತ ಟಿವಿ ಟೆಕ್ನೀಷಿಯನ್ ಆಗಿದ್ದು ಬಳಿಕ ಕುಲಶೇಖರದ ಕೆಎಮ್ ಎಫ್ ನಲ್ಲೂ ಕರ್ತವ್ಯ ನಿರ್ವಹಿಸಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನ ಅಗಲಿದ್ದಾರೆ.

Leave a Reply

Your email address will not be published. Required fields are marked *