ಉಪ್ಪಿನಂಗಡಿ: ಹಾಡುಹಗಲೇ ಅಂಗಡಿಯೊಂದರಿಂದ ಲಕ್ಷಾಂತರ ರೂ ನಗದು ಕಳವುಗೈದ ಘಟನೆ ಉಪ್ಪಿನಂಗಡಿಯಲ್ಲಿ ಅ.27 ರಂದು ನಡೆದಿದೆ.
ಸೋಮವಾರ ಮಧ್ಯಾಹ್ನದ ವೇಳೆ ಈ ಕಳವು ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

ಕಳ್ಳತನ ನಡೆದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಅದರ ರೀಚಾರ್ಜ್ ಮಾಡಿಸದೆ ಬಿಟ್ಟಿದ್ದರು. ಆಶ್ಚರ್ಯವೆಂದರೆ, ಕಳ್ಳತನದ ವೇಳೆ ಅಂಗಡಿಯ ಬಾಗಿಲೇ ಹಾಕಿರಲಿಲ್ಲ, ಹಾಗೂ ಕ್ಯಾಮರಾವನ್ನೂ ಆಫ್ ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರದಿದೆ



