Breaking
23 Jun 2026, Tue

ಕೊಣಾಜೆಯ ಬೆಳ್ಮದಲ್ಲಿ ಬಾವಿಗೆ ಬಿದ್ದ ಮಗುವಿನ ರಕ್ಷಣೆ

ಮಂಗಳೂರು: ಮನೆಯಂಗಳದಲ್ಲಿ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆ ಸಮೀಪದ ಬಾವಿಗೆ ಬಿದ್ದ ಘಟನೆ ಅ.26 ರಂದು ಸಂಜೆ ಮಂಗಳೂರಿನ ಕೊಣಾಜೆಯ ಬೆಳ್ಮ ಸಮೀಪದ ಮಾರಿಯಮ್ಮಗೋಳಿ ಎಂಬಲ್ಲಿ ನಡೆದಿದೆ.

ಮಗು ಆಡುತ್ತಾ ಅಂಗಳ ಸಮೀಪದ ಬಾವಿಗೆ ಬಿದ್ದಿದ್ದು ಕೂಡಲೇ ಮನೆ ಮಂದಿ ಬೊಬ್ಬೆ ಹಾಕಿದಾಗ ಮಗುವಿನ ಚಿಕ್ಮಪ್ಪ ಜೀವನ್ ಎಂಬವರು ಬಾವಿಗೆ ದುಮುಕಿದ್ದಾರೆ. ಬಳಿಕ ಸ್ಥಳೀಯ ಯುವಕ ವಿವೇಕ್ ಪೂಜಾರಿ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಾಹಸ ಮೆರೆದ ಮಗುವಿನ ಚಿಕ್ಕಪ್ಪ ಹಾಗೂ ಸ್ಥಳೀಯ ಯುವಕನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *