ಹೆಬ್ರಿ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ 38ನೇ ಕಳ್ತರು ಗ್ರಾಮದ ಸಂತೆಕಟ್ಟೆಯ ಮೂಲ್ಕಿ ಎಂಬಲ್ಲಿ ನಡೆದಿದೆ.
ಮೃತರನ್ನು ಸಂತೆಕಟ್ಟೆಯ ಬಾಬು ನಾಯ್ಕ(55) ಎಂದು ಗುರುತಿಸಲಾಗಿದೆ.

ಬಾಬು ನಾಯ್ಕ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಮನೆಯ ಪಕ್ಕದಲ್ಲಿರುವ ಕಟ್ಟೆ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ಬೆಳಗ್ಗೆ ವಿದ್ಯುತ್ ಇಲ್ಲದ ಕಾರಣ ಮನೆಯ ಎದುರಿನಲ್ಲಿರುವ ಬಾವಿಯಿಂದ ನೀರು ತರಲು ಹೋದಾಗ ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





