Breaking
23 Mar 2026, Mon

ಹೊನ್ನಾವರದಲ್ಲಿ ಯುವತಿ ಶವ, ಬಾವಿಯಲ್ಲಿ ಪತ್ತೆ

ಉತ್ತರ ಕನ್ನಡ: ಯುವತಿಯೊಬ್ಬಳ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಿಬೈಲ್ ಗ್ರಾಮದದಲ್ಲಿ ನಡೆದಿದೆ.

ಗುಂಡಿಬೈಲ್ ಗ್ರಾಮದ ಯುವತಿ ಗಾಯತ್ರಿ ಕೇಶವ (25 ) ಗೌಡ ಮೃತ ದುರ್ದೈವಿಯಾಗಿದ್ದಾರೆ.

ಮಂಕಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಾಯತ್ರಿ ಅವರು ಶನಿವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಕುಟುಂಬದವರೊಂದಿಗೆ ಸಹಜವಾಗಿ ಮಾತನಾಡಿ ಸಂಜೆ ಸಮಯ ಕಳೆದಿದ್ದರು.

ಆದರೆ ರಾತ್ರಿ ಸುತ್ತಮುತ್ತ 9 ಗಂಟೆಗೆ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ಅವರು ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದಾಗ ತೋಟದ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆಯ ಕುರಿತು ಗಾಯತ್ರಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *