Breaking
24 Dec 2024, Tue

ಭುಗಿಲೆದ್ದ ಆಕ್ರೋಶ: ಮೂಡುಬಿದಿರೆ ಪೊಲೀಸ್ ಠಾಣಾ ಬಳಿ ಸೇರಿದ ನೂರಾರು ಭಜಕರು:ದೂರು

ಮೂಡಬಿದ್ರೆ :ಭಜನೆಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಕಾರಿಯಾದ ಹೇಳಿಕೆಯನ್ನು ನೀಡಿದ ಅರಣ್ಯ ಇಲಾಖೆ ಅಧಿಕಾರಿ ಸಂಜೀವ ಪೂಜಾರಿ ಮತ್ತು ಕುಣಿತ ಭಜನೆಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದವರ ವಿರುದ್ಧ ಮೂಡಬಿದ್ರೆಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ನೂರಾರು ಸಂಖ್ಯೆಯಲ್ಲಿ ಭಜನಾ ತಂಡಗಳು ಪೊಲೀಸ್ ಠಾಣೆಗೆ ದಾವಿಸಿದರು.

ಭಜನೆ ಎನ್ನುವುದು ದೇವರನ್ನು ಸುಲಭದಲ್ಲಿ ಉಳಿಸುವಂತಹ ಮಂತ್ರ ಭಜನಾ ತಂಡಗಳು ಯಾವುದೇ ಹೋರಾಟದ ಹಾದಿಯನ್ನು ಹಿಡಿದವರಲ್ಲ ಆದರೆ ಕೆಲವರು ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಧರ್ಮವನ್ನು ಹೊಡೆದು ಹಾಕಲು ಅವಹೇಳನಕಾರಿ ಹೇಳಿಕೆಯನ್ನ ಭಜನಾ ತಂಡಕ್ಕೆ ಬರುವ ಮಕ್ಕಳ ಮೇಲೆ ಕೊಟ್ಟಿದ್ದಾರೆ ಇಂತಹ ಹೇಳಿಕೆಗಳನ್ನು ಕೇಳಿಯೂ ನಾವು ಸುಮ್ಮನಿದ್ದರೆ ಮುಂದಕ್ಕೆ ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತದೆ ಎನ್ನುವ ದೃಷ್ಟಿಯಿಂದ ಇವತ್ತು ಭಜನಾ ತಂಡಗಳ ಮಕ್ಕಳು ಮತ್ತು ಪೋಷಕರು ಅದರಲ್ಲೂ ಮುಖ್ಯವಾಗಿ ಮಕ್ಕಳು ಮತ್ತು ತಾಯಂದಿರು ಇವರುಗಳ ಹೇಳಿಕೆಯಿಂದ ತಮಗಾದ ನೋವಿನ ಬಗ್ಗೆ ಪೊಲೀಸ್ ಕಚೇರಿಯಲ್ಲಿ ಕೇಸ್ ಅನ್ನು ದಾಖಲಿಸಿದ್ದೇವೆ ಎಂದು ಭಜಕರು ತಮ್ಮ ನೋವನ್ನು ವ್ಯಕ್ತಪಡಿಸಿದರು.

ನೂರಾರು ಸಂಖ್ಯೆಯಲ್ಲಿ ಭಜಕರು ಸೇರಿದ್ದು ಅವರ ಹೇಳಿಕೆಯಿಂದ ತಮಗಾದ ನೋವಿನ ವಿರುದ್ಧ ಭಜನಾ ತಂಡಗಳ ಮಕ್ಕಳು ಮತ್ತು ಪೋಷಕರು ಧ್ವನಿ ಎತ್ತಿದರು.ಭಜನೆ ಎನ್ನುವುದು ಭಗವಂತನನ್ನು ಒಲಿಸುವ ಸನ್ಮಾರ್ಗವಾಗಿದೆ ಇಂತಹ ಮಾತುಗಳಿಂದ ಮುಂದಿನ ದಿನಗಳಲ್ಲಿ ಅಶಾಂತಿ ನಿರ್ಮಿಸುವ ಹುನ್ನಾರವಾಗಿದೆ ಎಂದು ಮೂಡಬಿದ್ರೆ ತಾಲೂಕಿನ ಅಧ್ಯಕ್ಷರಾದ ಲಕ್ಷ್ಮಣ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಸುಚೇತನ್ ಜೈನ್, ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಸಮಿತ್ ರಾಜ್ ದರೆಗುಡ್ಡೆ, ಬಜರಂಗದಳ ಸಂಘಟನೆಯ ಪ್ರಮುಖರಾದ ಪ್ರವೀಣ್ ಬೋರುಗುಡ್ಡೆ, ಅವಿನಾಶ್, ಪುನೀತ್ ಭಜನೆಯ ತರಬೇತುದಾರರಾದ ಅಶೋಕ್ ನಾಯ್ಕ್ ಕಳಸ ಬೈಲು, ವಿಜಯ್ ನೀರ್ಕೆರೆ, ಲಕ್ಷ್ಮಣ್ ನಾಯ್ಕ್, ರಿತೇಶ್ ಕಾಜಿಲ, ಸಂದೀಪ್ ಬಡಕಬೈಲು, ಗಣೇಶ್ ಪೆರಾಡಿ, ನವೀನ್ ಗಂಜಿಮಠ ಹಾಗೂ ಭಜನಾ ಪರಿಷತ್ತಿನ ವಲಯ ಅಧ್ಯಕ್ಷರು ಸಹಿತ ಅಸಂಖ್ಯಾತ ಭಜನಾ ಕಾರ್ಯಕರ್ತರು ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *