ಶಿವಮೊಗ್ಗ: ವಾಹನದಲ್ಲಿ ಗೋ ಸಾಗಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ವಾಹನ ಸಮೇತ ಪೊಲೀಸರು ಬಂಧಿಸಿರುವ ಶಿವಮೊಗ್ಗ ಜಿಲ್ಲೆಯ ಘಟನೆ ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಬಳಿ ಅ.24 ರಂದು ನಡೆದಿದೆ.

ಶರತ ಬಿನ್ ಧರ್ಮೇಗೌಡ (35), ಕಡೇಮನೆ ಬಿಳುಕೊಪ್ಪ, ಮತ್ತೊರ್ವ ನಯಾಜ್ ಬಿನ್ ಇಲಿಯಾಜ್ ಖಾನ್( 34) ಗಾಜನೂರು ಬಂಧಿತ ಆರೋಪಿಗಳು.

ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನ ಬಿರಿಯಾನಿ ಪಾಯಿಂಟ್ ಹಿಂಭಾಗ ಗ್ಯಾರೇಜ್ ಹತ್ತಿರ ಜಾನುವಾರುಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವುದಾಗಿ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ಬಂದಿದ್ದು ಕೂಡಲೇ ದಾಳಿ ನಡೆಸಿದ ಪೊಲೀಸರು ಸ್ಥಳಿಯರ ಸಹಾಯದಿಂದ ವಾಹನ ಸಮೇತ ಇಬ್ಬರನ್ನು ಬಂಧಿಸಲಾಗಿದೆ.

ಅಷ್ಟೇ ಅಲ್ಲದೆ ವಿಚಾರಣೆಯ ವೇಳೆ ಈ ಗೋ ಕಳ್ಳರು ರಸ್ತೆ ಬದಿಯಲ್ಲಿ ಮಲಗಿದ್ದ ಬಿಡಾಡಿ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗಲು ವಾಹನ ಸಮೇತ ಬಂದಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇಬ್ಬರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದು ಇನ್ನು ಮುಂದೆ ಯಾವುದೇ ಅಕ್ರಮ ಗೋವಿನ ಸಾಗಾಟ ಕಂಡುಬoದರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬೀಟ್ ಸಿಬ್ಬಂದಿಗಳಿಗೆ ತಿಳಿಸಲು ಸೂಚನೆಯನ್ನು ಪೊಲೀಸರು ನೀಡಿದ್ದಾರೆ.


