ಬೆಳ್ತಂಗಡಿ; ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮಪಂಚಾಯತು ವ್ಯಾಪ್ತಿಯ ನಾಲ್ಕೂರು ಗ್ರಾಮದ ಕುಡುಂಬಾಜೆ ಎಂಬಲ್ಲಿ ನಡೆದಿದೆ.

ಕುಡುಂಬಾಜೆ ನಿವಾಸಿ ಮೆಲ್ವಿನ್(55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಎಲ್ಲರೊಂದಿಗೂ ಆತ್ಮೀಯತೆಯಿಂದ ಇರುವ ವ್ಯಕ್ತಿತ್ವದವರಾಗಿದ್ದರು. ಮೃತರು ತಾಯಿ ಸಹೋದರಿಯರು ಹಾಗೂ ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.




