Breaking
10 May 2026, Sun

ಉಪ್ಪಿನಂಗಡಿಯಲ್ಲಿ ಡಿವೈಡರ್‌ಗೆ ಕಾರು ಢಿಕ್ಕಿ, ಕಾರಿನಲ್ಲಿದ್ದ ಯುವಕ ಸಾವು

ಉಪ್ಪಿನಂಗಡಿ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಅಡ್ಡಹೊಳೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.

ಹೊಳೆನರಸೀಪುರದ ಸಂಜಯ್ (25) ಸ್ಥಳದಲ್ಲಿಯೇ ಸಾವಿಗೀಡಾದ ಯುವಕ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರು ಚಾಲಕ ಅರಕಲಗೂಡು ನಿವಾಸಿ ಸಂದೀಪ್, ಕಾರಿನಲ್ಲಿದ್ದ ಶೇಷ, ಮಹೇಶ್ ಅವರು ಅಪಾಯದಿಂದ ಪಾರಾಗಿದ್ದಾರೆ.

ಸಂಜಯ್ ಹಾಗೂ ಇತರರು ತಮ್ಮ ತೋಟದಲ್ಲಿ ಬೆಳೆದ ಹೂಗಳನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರಾಟ ಮಾಡಲು ಉಡುಪಿಗೆ ಬಂದಿದ್ದರು. ಹೂವು ಮಾರಾಟ ಮಾಡಿ ಮತ್ತೆ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *