Breaking
19 Sep 2026, Sat

ಬಜ್ಪೆಯಲ್ಲಿ ಮನೆಗೆ ನುಗ್ಗಿ ಬರೀ ಕೈಯಲ್ಲಿ ಮರಳಿದ ಕಳ್ಳರು

ಮಂಗಳೂರು: ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ ಘಟನೆ ಮಂಗಳೂರಿನ ಬಜ್ಪೆಯ ಪೆರ್ಮುದೆ ಬಂಡಸಾಲೆಯ ಬಳಿ ನಡೆದಿದೆ.

ಬಂಡಸಾಲೆಯ ನಿವಾಸಿ ಶಿಕ್ಷಕಿ ಶೋಭಾ ಬ್ರಿಟೋ ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಮನೆಯೆಲ್ಲ ಜಾಲಾಡಿದ ಕಳ್ಳರಿಗೆ ಯಾವುದೇ ಆಭರಣ ಸಿಗದಿರುವುದು ಹಾಗೂ ಅಲ್ಲಿದ್ದ ಲ್ಯಾಪ್‌ಟಾಪ್ ನ್ನು ಕಳವು ಮಾಡದೇ ಇರುವುದು ಕಂಡು ಬಂದಿದೆ.

ಶೋಭಾ ಅವರು ಅ.22ರಂದು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದು ಈ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.ಅ.23ರoದು ಶಿಕ್ಷಕಿ ಸಂಜೆ ಶಾಲೆಯಿಂದ ಮನೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಅ.23ರoದು ರಾತ್ರಿ ಅಲ್ಲಿಯೇ ಪಕ್ಕದ ಗುಜರಿ ಅಂಗಡಿಯ ಶಟರ್‌ನ್ನು ಮುರಿಯುವ ವಿಫಲ ಪ್ರಯತ್ನ ಕಳ್ಳರು ಮಾಡಿರುವುದು ಕಂಡು ಬಂದಿದೆ. ಪೆರ್ಮುದೆಯಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗುತ್ತಿರುವುದು ಸಾರ್ವಜನಿಕರ ನಿದ್ದೆ ಗೆಡಿಸಿದೆ.

Leave a Reply

Your email address will not be published. Required fields are marked *