Breaking
24 Mar 2026, Tue

ಮೈಸೂರು-ಗುಂಡ್ಲುಪೇಟೆ ರಾ.ಹೆ ಭೀಕರ ರಸ್ತೆ ಅಪಘಾತ,ಇಬ್ಬರು ಸಾವು, ಮೂವರು ಗಂಭೀರ

ಚಾಮರಾಜನಗರ : ಟಿಪ್ಪರ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಕೇರಳ ಮೂಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಸೇರಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ-766ರ ಮಾದಪಟ್ಟಣ ಗೇಟ್ ಬಳಿ ಅ.25 ಬೆಳಗ್ಗೆ ನಡೆದಿದೆ.

ಮೃತರನ್ನು ಕೇರಳ ಮೂಲದ ಕಾರು ಚಾಲಕ ಬಷೀರ್(53) ಹಾಗೂ ನಸೀಮಾ ಬಷೀರ್(42) ಮೃತರು. ಮಹಮ್ಮದ್ ಷಪಿ(32), ಜಸೀರಾ(28) ಹಾಗೂ ಮೂರು ವರ್ಷದ ಮಗು ಅಜೈಮ್ ಅನಾನ್ ತೀವ್ರ ಗಾಯಾಗೊಂಡವರಾಗಿದ್ದಾರೆ.

ಗುoಡ್ಲುಪೇಟೆ ಕಡೆಯಿಂದ ಕಲ್ಲು ತುಂಬಿಕೊoಡು ತೆರಳುತ್ತಿದ್ದ ಟಿಪ್ಪರ್ ಲಾರಿ ಹಾಗೂ ಮೈಸೂರಿನಿಂದ ಬರುತಿದ್ದ ಕೇರಳ ಮೂಲದ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟಿಪ್ಪರ್ ಲಾರಿ ರಸ್ತೆ ಬದಿಯ ಜಮೀನಿಗೆ ನುಗ್ಗಿದ್ದೆ.

ಟಪ್ಪರ್ ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *