ಮಂಗಳೂರು: ಹಿಂದೂ ಸಂಘಟನೆಯ ಅಕ್ಷಯ್ ರಾಜ್‌ಪುತ್ ಅವರ ವಾಟ್ಸಾಪ್ ನಂಬರ್ (+91 9148949324) ಅನ್ನು ವಾಟ್ಸಾಪ್ ಕಂಪನಿಯು ಶಾಶ್ವತವಾಗಿ ರದ್ದುಪಡಿಸಿದೆ ಎಂದು ತಿಳಿದು ಬಂದಿದೆ.

ಅಕ್ಷಯ್ ಅವರು ಸುಮಾರು ಹತ್ತು ವರ್ಷಗಳಿಂದ ಈ ನಂಬರ್ ನ್ನು ನಿರಂತರವಾಗಿ ಬಳಸುತ್ತಿದ್ದು ಕಂಪನಿಯು ತನ್ನ ನೀತಿ ಹಾಗೂ ನಿಯಮಗಳಿಗನುಗುಣವಾಗಿ ಸ್ಥಗಿತಗೊಳಿಸಿದೆ ಎಂದು ವಾಟ್ಸಾಪ್ ಮೂಲಗಳು ತಿಳಿಸಿವೆ.

ಅಕ್ಷಯ್ ರಾಜ್‌ಪುತ್ ಅವರು ಇತ್ತೀಚೆಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಜಿಲ್ಲೆಯ ಮಟ್ಟದಲ್ಲಿ ಹಿಂದೂ ಸಂಘಟನೆಯ ಗಡಿಪಾರದ ಪ್ರಮುಖರಲ್ಲಿ ಒಬ್ಬರು. ಈ ಹಿನ್ನೆಲೆ ಅವರ ಖಾತೆ ರದ್ದುಗೊಂಡಿರುವುದು ಸಾಮಾಜಿಕ ವಲಯದಲ್ಲಿ ಹಲವಾರು ಚರ್ಚೆಗಳಿಗೆ ಕಾರಣವಾಗಿದೆ.



