Breaking
23 Mar 2026, Mon

ಬೆಂಗಳೂರಿನಲ್ಲಿ ಏಕಾಏಕಿ ಕಟ್ಟಡ ನೆಲಸಮ, ಓರ್ವ ಸಾವು

ಬೆಂಗಳೂರು: ಏಕಾಏಕಿ ಬೃಹತ್ ಕಟ್ಟಡವೊಂದು ನೆಲಸಮಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನ ತ್ರಿವೇಣಿ ನಗರದಲ್ಲಿ ಅ.25 ರಂದು ನಡೆದಿದೆ.

ಘಟನೆಯಲ್ಲಿ ಅಕ್ಕಪಕ್ಕದ ಮನೆಗಳ ಕಿಟಕಿಗಳಿಗೂ ಹಾನಿಯಾಗಿದ್ದು, ಈ ವೇಳೆ ಮನೆಯಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬಾಂಬ್ ಸ್ಮಾಡ್ ಹಾಗೂ ಡಾಗ್ ಸ್ಕ್ಯಾಡ್ ಅಧಿಕಾರಿಗಳಿಂದಲೂ ಸ್ಥಳ ಪರಿಶೀಲನೆ ನಡೆಯುತ್ತಿದೆ. ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *