Breaking
19 Sep 2026, Sat

ಬೆಂಗಳೂರಿನಲ್ಲಿ ಮಗಳನ್ನು ಹತ್ಯೆ ಮಾಡಿದ ಮಲತಂದೆ

ಬೆಂಗಳೂರು: ಮಗಳನ್ನು ಮಲತಂದೆ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕುಂಬಳಗೂಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ.

ಸಿರಿ(7) ಕೊಲೆಯಾದ ಬಾಲಕಿಯಾಗಿದ್ದು, ದರ್ಶನ್ ಹತ್ಯೆಗೈದ ಮಲತಂದೆಯಾಗಿದ್ದಾನೆ.

ಮೊದಲ ಗಂಡ ಮೃತಪಟ್ಟ ಮೇಲೆ ದರ್ಶನ್ ಜೊತೆ ಬಾಲಕಿಯ ತಾಯಿ ವಿವಾಹವಾಗಿದ್ದರು. ಹೆಂಡತಿ ಜೊತೆ ಗಲಾಟೆ ಮಾಡಿ ಮಗಳನ್ನು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.

ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *