Breaking
23 Mar 2026, Mon

ತೆಕ್ಕಟ್ಟೆಯ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ,7 ಮಂದಿಯ ಬಂಧನ

ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮದಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅ.23 ರಂದು ಸಂಜೆ ಎಸ್.ಪಿ ಕ್ರಿಯೇಶನ್ ಕ್ಲಬ್‌ನಲ್ಲಿ ಹಣ ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದರು ಎಂದು ತಿಳಿದು ಬಂದಿದೆ.

ದಾಳಿಯ ವೇಳೆ ಆಟಕ್ಕೆ ಬಳಸಲಾಗಿದ್ದ ರೂ.1,130 ನಗದು, ಇಸ್ಪೀಟ್ ಎಲೆಗಳು, 7 ಮೊಬೈಲ್‌ಗಳು, ಕುರ್ಚಿಗಳು, ಟೇಬಲ್‌ಗಳು, ಸಿಸಿಟಿವಿ ಡಿವಿಆರ್ ಮತ್ತು ಕ್ಲಬ್‌ನ ಲೆಜ್ಜರ್ ಪುಸ್ತಕಗಳು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಮತ್ತು ತಂಡದವರು ಭಾಗವಹಿಸಿದರು.

Leave a Reply

Your email address will not be published. Required fields are marked *