Breaking
23 Mar 2026, Mon

ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಸಾವು

ಹಾವೇರಿ: ಮನೆಯ ಎದುರು ನೀರು ತುಂಬಿಟ್ಟಿದ್ದ ಬಕೆಟ್ ಗೆ ಬಿದ್ದು ಅಸ್ವಸ್ಥಗೊಂಡಿದ್ದ 14 ತಿಂಗಳ ಮಗು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅ.23 ರಂದು ರಾತ್ರಿ ಮೃತಪಟ್ಟಿದೆ.

ದಕ್ಷಿತ್ ಎಂಬ ಮಗು ಮನೆಯ ಮುಂಭಾಗದಲ್ಲಿ ಅಕ್ಟೋಬರ್ 19ರಂದು ಆಟವಾಡುತ್ತಿತ್ತು.

ಮನೆಯ ಎದುರು ನೀರು ತುಂಬಿದ್ದ ಬಕೆಟ್ ನಲ್ಲಿ ತಲೆ ಕೆಳಗಾಗಿ ಮಗು ಬಿದ್ದಿತ್ತು. ಅಲ್ಲಿಯೇ ಪ್ರಜ್ಞೆ ತಪ್ಪಿತ್ತು. ಬಕೆಟ್‌ನಲ್ಲಿ ಮಗುವಿನ ಕಾಲು ನೋಡಿದ್ದ ಪೋಷಕರು ಹಾಗೂ ಸ್ಥಳೀಯರು, ಮಗುವನ್ನು ಮೇಲಕ್ಕೆ ಎತ್ತಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸವಾಗಿದೆ.

ಈ ಬಗ್ಗೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *