Breaking
25 Sep 2026, Fri

ಎರ್ಲಪಾಡಿಯ ಅಕ್ರಮ ಕಲ್ಲು ಗಣಿಗಾರಿಕೆಯ ಪ್ರದೇಶಕ್ಕೆ ಕಾರ್ಕಳ ಪೊಲೀಸರ ದಾಳಿ

ಕಾರ್ಕಳ: ತಾಲೂಕಿನ ಎರ್ಲಪಾಡಿ ಗ್ರಾಮದ ಕುಂಟಲಪಾಡಿ ಸರಕಾರಿ ಸ್ಥಳದಲ್ಲಿ ಕಲ್ಲುಕೋರೆ ಪಾದೆಯಲ್ಲಿ ಪರವಾನಿಗೆ ಹೊಂದದೇ ಅಕ್ರಮ ಗಣಿಕಾರಿಕೆ ನಡೆಸುತ್ತಿದ್ದವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅ.23 ರಂದು ದೂರು ದಾಖಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್ ಇವರಿಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರೊ೦ದಿಗೆ ದಾಳಿ ನಡೆಸಿ ಭೋಜ ಶೆಟ್ಟಿ ಬೈಲೂರು ಎಂಬವರು ಕಲ್ಲು ಕೋರೆ ಪ್ರದೇಶದಲ್ಲಿ ಸುಮಾರು 3,500/- ರೂಪಾಯಿ ಮೌಲ್ಯದ 300 ಸೈಜು ಶಿಲೆ ಕಲ್ಲುಗಳನ್ನು ಸಾಗಾಟ ಮಾಡಲು ಸಂಗ್ರಹ ಮಾಡಿದ್ದು ಅಲ್ಲದೆ ಸುಮಾರು 150 ಸೈಜು ಕಲ್ಲುಗಳನ್ನು ಲಾರಿಯಲ್ಲಿ ಲೋಡು ಮಾಡಿ ಸಾಗಾಟ ಮಾಡಲು ಪ್ರಯತ್ನಿಸಿರುವ ಬಗ್ಗೆ ದೂರು ದಾಖಲಾಗಿದೆ.

ಪೊಲೀಸರು ಸೈಜು ಕಲ್ಲು, ಲಾರಿ, ಕಬ್ಬಿಣದ ಸುತ್ತೆ, ಕಬ್ಬಿಣದ ಚಮ್ಮಡಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *