Breaking
25 Sep 2026, Fri

ಪಟಾಕಿ ಅಂಗಡಿ ಮಾಲಕರಿಂದ ಹಣ ವಸೂಲಿ ಯತ್ನ ಆರೋಪ,ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಂಗಳೂರು: ಪಟಾಕಿ ಅಂಗಡಿ ಮಾಲಕರಿಂದ ಹಣ ವಸೂಲಿ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ಪ್ರಶಾಂತ್ ಅಲಿಯಾಸ್ ಪಾಚು ಹಾಗೂ ಅಶ್ವಿತ್ ಎಂಬವರ ಮೇಲೆ ಪಟಾಕಿ ಅಂಗಡಿ ಮಾಲಕರಿಂದ ಹಣ ವಸೂಲಿಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಬಜ್ಪೆಯ ಪಟಾಕಿ ಅಂಗಡಿ ಮಾಲಕ ದಾಮೋದರ್ ಅವರ ಅಂಗಡಿಗೆ ಆರೋಪಿಗಳು ಬಂದು, ಬೆದರಿಕೆ ಹಾಕಿ ಹಣ ಕಸಿಯಲು ಯತ್ನಿಸಿದರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳ ಭಯದಿಂದ ಪ್ರಾರಂಭದಲ್ಲಿ ದೂರು ನೀಡದ ದಾಮೋದರ್, ಬಳಿಕ ಪೊಲೀಸರ ರಕ್ಷಣಾ ಭರವಸೆ ಪಡೆದ ನಂತರ ದೂರು ಸಲ್ಲಿಸಿದ್ದಾರೆ.

ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *