Breaking
25 Sep 2026, Fri

ಪಡೀಲು ಜಂಕ್ಷನ್‌ನಲ್ಲಿ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ವಶ

ಮಂಗಳೂರು: ಪಡೀಲು ಜಂಕ್ಷನ್‌ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 15 ಸಾವಿರ ರೂ. ಮೌಲ್ಯದ ಕೆಂಪುಕಲ್ಲು ಸಹಿತ ಲಾರಿಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಡೀಲ್ ಜಂಕ್ಷನ್ ಸಮೀಪದ ಪೆಟ್ರೋಲ್ ಪಂಪ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎಸ್ಐ ಆನಂದ್ ಹಾಗೂ ಪಿಸಿ ಹರಿಶ್ಚಂದ್ರ ರವರೊಂದಿಗೆ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪಂಪ್ ವೆಲ್ ಕಡೆಯಿಂದ ಲಾರಿಯೊಂದು ಬಂದಿದ್ದು ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಚಾಲಕ ಸ್ವಲ್ಪ ದೂರ ತೆರಳಿ ವಾಹನ ನಿಲ್ಲಿಸಿ ಸ್ಥಳದಿಂದ ಚಾಲಕ ಲಾರಿಯಿಂದ ಪರಾರಿಯಾಗಿದ್ದಾನೆ.

ಲಾರಿಯನ್ನು ಪರಿಶೀಲಿಸಿದಾಗ ಕೆಂಪು ಕಲ್ಲುಗಳು ಕಂಡು ಬಂದಿದ್ದು ಕೆಂಪುಕಲ್ಲು ಸಹಿತ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *