Breaking
26 Jun 2026, Fri

ಭಟ್ಕಳದಲ್ಲಿ ಸ್ಕೂಟರ್‌ಗೆ ಲಾರಿ ಡಿಕ್ಕಿ , ಸವಾರ ಮೊಹ್ತಿಶಾಮ್ ಸಾವು

ಭಟ್ಕಳ: ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದು ಸವಾರ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಭಟ್ಕಳದ ತೆಂಗಿನಗುಂಡಿ ಕ್ರಾಸ್ ಬಳಿ ಅ.15 ರಂದು ನಡೆದಿದೆ.

ಸ್ಕೂಟರ್ ಸವಾರ ಫಿರ್ದೌಸ್ ನಗರದ ನಿವಾಸಿ ಮೊಹ್ತಿಶಾಮ್ (18) ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಪ್ಲೈವುಡ್ ತುಂಬಿದ ಲಾರಿಯೊಂದು ಕೇರಳದಿಂದ ಮುಂಬೈಗೆ ತೆರಳುತ್ತಿದ್ದಾಗ ತೆಂಗಿನಗುಂಡಿ ಕ್ರಾಸ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಡಿಕ್ಕಿ ಪರಿಣಾಮ ಮೊಹ್ತಿಶಾಮ್ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಮೊಹಮ್ಮದ್ ಮೊಹ್ತಿಶಾಮ್ ಅದೇ ಪ್ರದೇಶದಲ್ಲಿರುವ ಅಲಿ ಪಬ್ಲಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು ಎಂದು ತಿಳಿದು ಬಂದಿದೆ.

ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *