ಕೇರಳ: ಕೇರಳಕ್ಕೆ ಆಗಮಿಸಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಂಡಿಗಾ, ಹೃದಯ ಸ್ತಂಭನದಿಂದಾಗಿ ನಿಧನರಾಗಿದ್ದಾರೆ.
ಇಂದು ಬೆಳಗಿನ ನಡಿಗೆಯ ವೇಳೆ ಆಯುರ್ವೇದ ಚಿಕಿತ್ಸೆಗೆ ಬಂದ ವೇಳೆ ಈ ಆಯುರ್ವೇದ ಕೇಂದ್ರದ ಆವರಣದಲ್ಲಿ ಹೃದಯಘಾತ ಸಂಭವಿಸಿ ಒಡಿಂಗಾ ಕುಸಿದು ಬಿದಿದ್ದರು.

ಈ ವೇಳೆ ತಕ್ಷಣವೇ ಕೂಥಾಟುಕುಳಂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಆಯುರ್ವೇದ ಕಣ್ಣಿನ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯಲ್ಲಿ ಒಡಿಂಗಾ ಅವರ ಪುತ್ರಿ ಕಣ್ಣಿನ ದೃಷ್ಟಿ ಮರಳಿ ಪಡೆದಿದ್ದರು.




