ಮುಂಬಯಿಯ ಜೋಗೇಶ್ವರಿ ಪೂರ್ವದಲ್ಲಿ ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಮನೆಗೆ ಭೇಟಿ ನೀಡಿದ ಹಿಂದೂ ನಾಯಕರು

ಮುಂಬಯಿ: ಮುಂಬಯಿ ಜೋಗೇಶ್ವರಿ ಪೂರ್ವದಲ್ಲಿ ನಡೆದ ದುರಂತದಲ್ಲಿ ಮಡಿದ ಸಂಸ್ಕೃತಿ ಅಮೀನ್ ಅವರ ಮನೆಗೆ ಹಿಂದೂ ನಾಯಕರು ಭೇಟಿ ನೀಡಿದರು.

ಸಂಸ್ಕೃತಿ ಅಮೀನ್ ಅವರ ತಂದೆ-ತಾಯಿಗೆ ಸಾಂತ್ವನ ಹೇಳಿದ ರಾಜಕೀಯ ಮುಖಂಡರು, “ಸರ್ಕಾರಿ ಅಧಿಕಾರಿಗಳ ಮೂಲಕ ನಾವು ಇದರ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ, ಸಂಬಂಧಪಟ್ಟ ಬಿಲ್ಡರ್ ಮಾಲೀಕರನ್ನು ಬಂಧಿಸಲು ನಮ್ಮಿಂದಾದಷ್ಟು ಪ್ರಯತ್ನ ಮಾಡುತ್ತೇವೆ. ಮುಂದೆ ಯಾವುದೇ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸಹಕಾರವಿರುತ್ತದೆ” ಎಂಬ ಆಶ್ವಾಸನೆಯನ್ನು ಕೊಟ್ಟಿದ್ದಾರೆ.

ಇದೇ ವೇಳೆ ಶ್ರದ್ಧಾ ಬಿಲ್ಡರ್‌ನ ಮಾಲೀಕರ ಮೇಲೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಮೀನಮೇಷ ಎಣಿಸುತ್ತಿರುವ ಬಗ್ಗೆ ಸಂಸ್ಕೃತಿ ಅಮೀನ್ ಅವರ ತಂದೆ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ.

ಈ ಸಂದರ್ಭ ಮಹೇಶ್ ಶೆಟ್ಟಿ ಅವರೊಂದಿಗೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಳ್ ಹರೀಶ್ ಶೆಟ್ಟಿ ಹಾಗೂ ಬಂಟರ ಸಂಘದ ಮುಂಬಯಿಯ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಿಜೆಪಿಯ ಯುವ ನಾಯಕ ಸಚ್ಚಿದಾನಂದ ಶೆಟ್ಟಿ, ಮುನ್ನಲಾಗುತು, ಮೀರಾ-ಭಾಯಂದರ್ ಪರಿಸರದ ಅರುಣ್ ಶೆಟ್ಟಿ ಪಣಿಯೂರು ಹಾಗೂ ತುಳು-ಕನ್ನಡಿಗರು, ಇತರರು ಜೊತೆಗಿದ್ದರು.

Leave a Reply

Your email address will not be published. Required fields are marked *