Breaking
25 Sep 2026, Fri

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೊತ್ತಿಟ್ಟ ಪ್ರಕರಣದಲ್ಲಿ ಹೇಳಿಕೆ ಬದಲಿಸಿದ ಮಾಸ್ಕ್ ಮ್ಯಾನ್ ಚಿನ್ನಯ್ಯ

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರನಾಗಿ ಬಂದು ಶಿವಮೊಗ್ಗದ ಜೈಲಿನಲ್ಲಿರುವ ಚಿನ್ನಯ್ಯ ಇದೀಗ ಇಡೀ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದಾನೆ.

ಇತ್ತೀಚೆಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡುವ ವೇಳೆ ಒಂದೇ ಸ್ಥಳದಲ್ಲಿ 10 ಮೃತದೇಹವನ್ನು ಹೂತಿದ್ದಾಗಿ ಹೇಳಿದ್ದಾನೆ ಅನ್ನುವ ಮಾಹಿತಿ ಇದೆ.

ಬೆಳ್ತಂಗಡಿ ಕೋರ್ಟ್ನಲ್ಲಿ ಬಿಎನ್ ಎಸ್ 183 ಅಡಿ ಹೇಳಿಕೆ ದಾಖಲಿಸುವ ವೇಳೆ ಒಂದೇ ಜಾಗದಲ್ಲಿ ಹತ್ತು ಶವ ಹೂತಿರುವುದಾಗಿ ಹೇಳಿಕೆ ಕೊಟ್ಟಿದ್ದಾನೆ. ಹತ್ತು ಶವ ಎಲ್ಲಿ ಊಳಲಾಗಿದೆ ಎಂದು ಆಳವಾದ ತನಿಖೆ ನಡೆಸಲು ಎಸ್‌ಐಟಿ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿರುವುದರಿಂದ, ಅಲ್ಲೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಹೇಳಿಕೆಯ ಸತ್ಯಾಸತ್ಯತೆ ಮತ್ತು ಹಿಂದಿನ ಹೇಳಿಕೆಗಳಿಗೂ ಇದಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಎಸ್‌ಐಟಿ ತನಿಖೆ ಮುಂದುವರಿಸಲಿದೆ.

ಚಿನ್ನಯ್ಯ ಎಸ್‌ಐಟಿ ಮುಂದೆ ಕೊಡದ ಮಾಹಿತಿ ಕೋರ್ಟ್ ಮುಂದೆ ಕೊಟ್ಟಿದ್ದಕ್ಕೆ ಅಧಿಕಾರಿಗಳು ಶಾಕ್ ಆಗಿದ್ದು, ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಧರ್ಮಸ್ಥಳದಲ್ಲಿ ಅನಾಥ ಶವಗಳನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಹೂಳಲಾಗಿದೆ ಎಂಬ ಪ್ರಕರಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ತನಿಖೆ ನಿರ್ಣಾಯಕ ಹಂತ ತಲುಪಿದೆ. ಆದರೆ, ಚಿನ್ನಯ್ಯ ಮತ್ತೊಂದು ಹೇಳಿಕೆ ಕೊಟ್ಟಿರುವ ಕಾರಣ ಮೊಹಂತಿ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಲಿದೆ ಅಂತ ಹೇಳಲಾಗುತ್ತಿವೆ.

Leave a Reply

Your email address will not be published. Required fields are marked *