Breaking
25 Sep 2026, Fri

ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ

ಪುತ್ತೂರು: ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಯನ್ನು ಸಿಟಿ ಗುಡ್ಡೆ ಮನೆ, ಕಬಕ ಗ್ರಾಮ, ಪುತ್ತೂರು ತಾಲೂಕು ಪ್ರವೀಣ್ (27) ಎಂದು ಗುರುತಿಸಲಾಗಿದೆ.

ಅ. 12 ರಂದು ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನದ ಬಳೆ ಒಂದು, ಕಿವಿಯೋಲೆ ಒಂದು ಜೋಡಿ, ಚಿನ್ನದ ಸರ ಒಂದು ಹಾಗೂ ನಗದು ಹಣ ಕಳವು ಮಾಡಿದ್ದಾರೆ ಎಂದು ಪಿರ್ಯಾದಿದಾರರಾದ ಪುತ್ತೂರು ತಾಲೂಕಿನ ನಿವಾಸಿ ರೇವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ತನಿಖೆ ಕೈಗೊಂಡು ಕಳ್ಳತನದ ಸುಳಿವು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಕಳವು ಮಾಡಲಾದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *