ಪುತ್ತೂರು : ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾದ ಚಂದ್ರಹಾಸ ಶೆಟ್ಟಿ ಅವರು ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಚಂದ್ರಹಾಸ ಶೆಟ್ಟಿ ಅವರು ಹಲವು ವರ್ಷಗಳಿಂದ ಕಂಬಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ನ ಮೊದಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಡಾ. ಜೀವಂಧರ್ ಬಲ್ಲಾಳ್ ಕಾಂತಾವರ, ಜೀವನ್‌ದಾಸ್ ಅಡ್ಯಂತಾಯ ಮಿಯಾರು, ಮತ್ತು ಕೆ. ಗುಣಪಾಲ ಕಡಂಬ ಕಾರ್ಕಳ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು ವಾಮಂಜೂರು, ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಂಗಿನಮನೆ ಕಾರ್ಕಳ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್. ಚಂದ್ರಹಾಸ ಶೆಟ್ಟಿ (ಪುತ್ತೂರು), ಚಂದ್ರಹಾಸ ಅನಿಲ್ (ಮೂಡುಬಿದಿರೆ), ಲೋಕೇಶ್ ಶೆಟ್ಟಿ (ಮುಚೂರು), ಭಾಸ್ಕರ್ ಕೋಟ್ಯಾನ್ (ಕಾರ್ಕಳ), ಸುಕುಮಾರ್ ಶೆಟ್ಟಿ (ಕೊಂಡೆಟ್ಟು), ಪಿ.ಆರ್. ಶೆಟ್ಟಿ (ಮಂಗಳೂರು), ರೋಹಿತ್ ಕುಮಾರ್ ಹೆಗ್ಡೆ (ಎರ್ಮಾಳ್), ಶ್ರೀಕಾಂತ್ ಭಟ್ (ಮಣಿಪಾಲ), ಶಾಂತಾರಾಮ ಶೆಟ್ಟಿ (ಬಾರಕೂರು), ಪಿಯೂಸ್ ರೊಡ್ರಿಗಸ್ (ಬಂಟ್ವಾಳ), ಉದಯಕುಮಾರ್ ಶೆಟ್ಟಿ (ಕಾರ್ಕಳ), ಸುಧಾಕರ ಹೆಗ್ಡೆ (ಹೆರಾಜೆ), ಅನಿಲ್ ಶೆಟ್ಟಿ (ಜಪ್ಪಿನಮೊಗರು), ಪ್ರಶಾಂತ್ ಕಾಜವ (ಬಂಟ್ವಾಳ), ಮತ್ತು ಅರುಣ್ ಕುಮಾರ್ ಶೆಟ್ಟಿ (ಬಜಪೆ) ಆಯ್ಕೆಯಾಗಿದ್ದಾರೆ.




