Breaking
25 Sep 2026, Fri

ಮಲ್ಪೆ ಬೀಚ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಣಿಪಾಲದ ಮಹಿಳೆಯ ರಕ್ಷಣೆ

ಉಡುಪಿ: ಮನನೊಂದು ಆತ್ಮಹತ್ಯೆ ಮಾಡಲು ಉಡುಪಿಯ ಮಲ್ಪೆ ಬೀಚ್ ಗೆ ಬಂದಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣೆಗೆ ಒಳಪಟ್ಟ ಮಹಿಳೆಯನ್ನು ಮಣಿಪಾಲ ಮೂಲದವರು ಎಂದು ತಿಳಿದು ಬಂದಿದೆ.

ಕೌಟುಂಬಿಕ ಸಮಸ್ಯೆಯಿಂದಾಗಿ ನೊಂದ ಮಹಿಳೆ ಮನನೊಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಗಸ್ತು ಸಿಬ್ಬಂದಿಯವರು ಸಮುದ್ರದಿಂದ ಮೇಲೆತ್ತಿ ಆರೈಕೆ ಮಾಡಿದರು.

ಈ ವೇಳೆ ಮಹಿಳೆಯನ್ನು ತಾನು ಆತ್ಮಹತ್ಯೆ ಮಾಡಲು ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಮಲ್ಪೆ ಠಾಣೆ ಸಿಬ್ಬಂದಿ ಆಗಮಿಸಿ ಮಹಿಳೆಯನ್ನು ವಶಕ್ಕೆ ಪಡೆದು ಠಾಣೆ ಗೆ ಕರೆದುಕೊಂಡು ಹೋಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಟೂರಿಸ್ಟ್ ಪೊಲೀಸರಾದ ಸುಬ್ರಮಣ್ಯ ಹಾಗೂ ಸುರೇಶ್ ಅಂಚನ್ ಪಡುಬಿದ್ರಿ ,ಗೃಹರಕ್ಷಕ ದಳದ ಸಿಬ್ಬಂದಿ ವಿಕಾಸ್ ಹಾಗೂ ಜೀವ ರಕ್ಷಕ ದಳದ ಸಿಬ್ಬಂದಿ ಅಶೋಕ್ ಮತ್ತು ದೂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *