Breaking
6 Aug 2026, Thu

ನಿವೃತ್ತ ಬ್ಯಾಂಕ್ ಉದ್ಯೋಗಿ,ಗಾಯಕ ಬಾಬಣ್ಣ ನಿಧನ

ವಿಟ್ಲ: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿದ್ದ, ಗಾಯಕ ಬಾಬು ಪೂಜಾರಿ (77) ನರಿಕೊಂಬುವಿನ ಸ್ವಗೃಹದಲ್ಲಿ ಭಾನುವಾರ ನಿಧನ ಹೊಂದಿದರು.

ಅದ್ಭುತ ಗಾಯನ ಪ್ರತಿಭೆ ಹೊಂದಿದ್ದು ಅವರು ದೇಶ ಕಂಡ ಶ್ರೇಷ್ಠ ಗಾಯಕ ಪಿ.ಬಿ. ಶ್ರೀನಿವಾಸ್ ಕಂಠ ಸಿರಿಯನ್ನು ಮರುಸೃಷ್ಟಿಸಿ ಹಾಡಿ ಜನಮನ್ನಣೆ ಗಳಿಸಿದ್ದರು.

ಪಿ.ಬಿ.ಎಸ್ ಬಾಬಣ್ಣ ಎಂದೇ ಗುರುತಿಸಲ್ಪಟ್ಟಿದ್ದರು.

ಅರುವತ್ತರ ದಶಕಗಳಿಂದ, ನೂರಾರು ನಾಟಕಗಳಲ್ಲಿ, ರಸ ಮಂಜರಿ ವೇದಿಕೆಗಳಲ್ಲಿ, ತುಳು ಕನ್ನಡ ಹಾಡುಗಳ ಗಾಯಕರಾಗಿ ಹೆಸರು ಗಳಿಸಿದ್ದರು. ವಿದೇಶದಲ್ಲೂ ತಮ್ಮ ಕಂಠ ಸಿರಿಯ ಮೂಲಕ ಮಿಂಚಿದ್ದರು.

Leave a Reply

Your email address will not be published. Required fields are marked *