Breaking
10 May 2026, Sun

ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡ ಯುವತಿಯ ಮೇಲೆ ಅತ್ಯಾಚಾರ, ಇಬ್ಬರ ಬಂಧನ

ಕಾಸರಗೋಡು: 2019ರಲ್ಲಿ ಸಾಮಾಜಿಕ ಜಾಲ ತಾಣದ ಮೂಲಕ ಪರಿಚಯಗೊಂಡ ಯುವತಿಯನ್ನು ಅತ್ಯಾಚಾರ ನಡೆಸಿ ಚಿನ್ನ ಲಪಟಾಯಿಸಿ ಹಣ. ವಸೂಲಿಗೆ ಯತ್ನಿಸಿದ ಇಬ್ಬರನ್ನು ಕಾಸರಗೋಡುವಿನ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಳಿಯಡ್ಲ ನಿವಾಸಿ ಹಾಗೂ ವಿದ್ಯಾನಗರದಲ್ಲಿ ವಾಸಿಸುವ ಮುಹಮದ್ ಅಫ್ರೀದ್(23), ಅನಂಗೂರು ಬೆದಿರ ಹೌಸ್ ನಿವಾಸಿ ಅಬ್ದುಲ್ ಖಾದರ್(28) ಬಂಧಿತ ಆರೋಪಿಗಳಾಗಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಬಾಲಕಿಯ ಗೆಳೆತನ ಬೆಳೆಸಿದ ಅಫ್ರೀದಿ ವಿವಿದ ಸ್ಥಳಗಳಿಗೆ ಕೊಂಡೊಯ್ದು ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಅನಂತರ ವಿಡಿಯೊ, ಪೊಟೋಗಳನ್ನು ತೆಗೆದು ಫೊಟೊ, ವಿಡಿಯೊ ಬಾಲಕಿಗೆ ತೋರಿಸಿ ಬೆದರಿಸಿ 22 ಗ್ರಾಂ ಚಿನ್ನ ತೆಗೆದುಕೊಂಡಿದ್ದ ಎನ್ನಲಾಗಿದೆ.

ಬೆದರಿಕೆ ಹೆಚ್ಚಾದಾಗ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದರು. ಪೊಲೀಸರ ಆದೇಶದಂತೆ ಬಾಲಕಿ ಆರೋಪಿಗಳಿಗೆ ಕರೆ ಮಾಡಿ ಹಣ ಕೊಡುತ್ತೇನೆ ಬನ್ನಿ ಎಂದರು. ಅದರಂತೆ ಬಂದ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *