Breaking
22 Mar 2026, Sun

ಗೆಳೆಯರಿಂದ ಖಾಸಗಿ ವಿಡಿಯೋ ಸೋರಿಕೆಯ ಬೆದರಿಕೆ, ಮನನೊಂದು ಯುವಕ ಆತ್ಮಹತ್ಯೆ

ಕಾರ್ಕಳ: ತನ್ನ ಗೆಳತಿಯೊಂದಿಗೆ ಇರುವ ಖಾಸಗಿ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಸ್ನೇಹಿತರು ಬೆದರಿಕೆ ಹಾಕಿದ ಹಿನ್ನಲೆ ಮನನೊಂದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.09ರಂದು ಕಾರ್ಕಳ ತಾಲೂಕಿನ ಬೆಳ್ಮಣ್ ನ ಖಾಸಗಿ ಲಾಡ್ಜ್ ಒಂದರಲ್ಲಿ ನಡೆದಿದೆ.

ಮೃತರನ್ನು ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಎಂದು ಗುರುತಿಸಲಾಗಿದೆ.

ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅಭಿಷೇಕ್ ಅವರು ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅವರ ಈ ಸಂಬಂಧವು ದೈಹಿಕ ಅನ್ಯೋನ್ಯತೆಗೆ ಮುಂದುವರೆದಿದ್ದು, ಇಬ್ಬರೂ ಒಟ್ಟಿಗೆ ಖಾಸಗಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಮಾಹಿತಿ ಇದೆ.

ಅಭಿಷೇಕ್ ಅವರ ಸ್ನೇಹಿತರು ಈ ಸಂಬಂಧದ ಬಗ್ಗೆ ತಿಳಿದುಕೊಂಡು ಖಾಸಗಿ ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಿರಂತರ ಮಾನಸಿಕ ಕಿರುಕುಳ ಮತ್ತು ಅವಮಾನದಿಂದ ನೊಂದ ಅಭಿಷೇಕ್, ಲಾಡ್ಜ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಡೆತ್ ನೋಟ್ ಮತ್ತು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *