Breaking
22 Mar 2026, Sun

ಕುಂದಾಪುರದಲ್ಲಿ ಸೈಬರ್‌ ವಂಚನೆ: ಗಿಫ್ಟ್‌ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ ರೂಪಾಯಿ ನಷ್ಟ

ಕುಂದಾಪುರ: ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿಯ ಅಭಿನಯ ಅವರಿಗೆ ಸೈಬರ್‌ ವಂಚಕರು ವಂಚಿಸಿರುವ ಘಟನೆ ನಡೆದಿದೆ.

ಅಭಿನಯ ಅವರಿಗೆ ಕಳೆದ ಮೇ ತಿಂಗಳಿನಲ್ಲಿ ಫೇಸ್‌ಬುಕ್‌ಗೆ ಡೆನಿಯಲ್ ಮೈಕಲ್ ಎಂಬ ಹೆಸರಿನ ಸಂದೇಶ ಬಂದಿತ್ತು. ಆತ ತನ್ನಿಂದ 1 ಮೊಬೈಲ್ ಫೋನ್ , ಬ್ಯಾಗ್ ಮತ್ತು 50,000 ಡಾಲರ್ ನೀಡುವುದಾಗಿ ತಿಳಿಸಿದ್ದನು. ಅದು ಇಂಡಿಯನ್ ಕರೆನ್ಸಿಯಲ್ಲಿ 56 ಲಕ್ಷ ರೂ. ಆಗುತ್ತದೆ ಎಂದು ಹೇಳಿ ಇದನ್ನು ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಹೇಳಿದ್ದನು.

ಆದರೆ ಗಿಫ್ಟ್ ಮನೆಗೆ ಬರಬೇಕಾದರೆ ಹಣ ಹಾಕುವಂತೆ ಆತ ತಿಳಿಸಿದ್ದು, ಅದನ್ನು ನಂಬಿದ ಅಭಿನಯ ಅವರು ವಿವಿಧ ಹಂತಗಳಲ್ಲಿ ಒಟ್ಟು 11,92,500 ರೂ. ಹಣವನ್ನು ಕಳುಹಿಸಿದ್ದರು. ಆದರೆ ನಂತರ ಸೈಬರು ವಂಚಕರು ಗಿಫ್ಟ್ ನೀಡದೆ, ಹಣವನ್ನೂ ವಾಪಾಸ್ಸು ಮಾಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *