Breaking
25 Sep 2026, Fri

ಉಡುಪಿಯಲ್ಲಿ ಗಾಂಜಾ ಮಾರಾಟ: ಆರೋಪಿಗಳ ಬಂಧನ

ಉಡುಪಿ: ಬೆಳಪು ಇಂಡಸ್ಟ್ರಿಯಲ್‌ ಏರಿಯಾ ಕ್ರಾಸ್‌ ರಸ್ತೆ ಬಳಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಭಿಷೇಕ್‌ ಪಾಲನ್(30 ), ಆರ್‌.ಶಾಶ್ವತ್(24 ) ಎಂದು ಗುರುತಿಸಲಾಗಿದೆ.

ಕಾಪು ತಾಲೂಕಿನ ಬೆಳಪು ಇಂಡಸ್ಟ್ರಿಯಲ್‌ ಏರಿಯಾ ಕ್ರಾಸ್‌ ರಸ್ತೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಶಿರ್ವ ಪೊಲೀಸ್‌ ಠಾಣಾ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಯವರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಗಳನ್ನು ಬಂದಿಸಿದ್ದಾರೆ.

ಆರೋಪಿಗಳಿಂದ ಸುಮಾರು 115.44 ಗ್ರಾಂ ಗಾಂಜಾ, ತೂಕದ ಡಿಜಿಟಲ್‌ ಯಂತ್ರ, ಪ್ಲಾಸ್ಟಿಕ್‌ ಡಬ್ಬ-1. ಸ್ಥಳದಲ್ಲಿದ್ದ ಮೋಟಾರ್‌ ಸೈಕಲನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *