Breaking
25 Sep 2026, Fri

ತಮಿಳುನಾಡಿನ 47 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಚೆನ್ನೈ: ತಮಿಳುನಾಡಿನ 47 ಮೀನುಗಾರರನ್ನ ಶ್ರೀಲಂಕಾ ನೌಕಾಪಡೆ ತಲೈಮನ್ನಾರ್‌ನಲ್ಲಿ ಬಂಧಿಸಿದೆ.

ಈ ಮೀನುಗಾರರು ಮನ್ನಾರ್ ಮತ್ತು ಡೆಲ್ಟಾ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲ ಇದೆ ವೇಳೆ 5 ಮೀನುಗಾರಿಕಾ ಬೋಟ್ಗಳನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮೀನುಗಾರರ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಕೇಂದ್ರ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಒಂದು ತಿಂಗಳ ಹಿಂದೆ ಉತ್ತರ ಶ್ರೀಲಂಕಾದ ಜಾಫ್ನಾ ಬಳಿ 12 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಪಡೆ ಬಂಧಿಸಿತ್ತು. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧದಲ್ಲಿ ಮೀನುಗಾರರಿಗೆ ಸಂಬಂಧಿಸಿದ ವಿಷಯ ವಿವಾದವಾಗಿಯೇ ಉಳಿದಿದೆ.

Leave a Reply

Your email address will not be published. Required fields are marked *