Breaking
22 Mar 2026, Sun

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 4 ಚಿನ್ನದ ಪದಕ ಗೆದ್ದ ಯಜತ್ ಎನ್. ಕೋಟ್ಯಾನ್

ಕೈಕಂಬ: ಬೆಂಗಳೂರಿನಲ್ಲಿ ಅ.04 ಹಾಗೂ ಅ.05 ರಂದು ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮೂಡುಶೆಡ್ಡೆಯ ಶಾರದಾ ಶುಭೋದಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಗುರುಪುರದ ಯಜತ್ ಎನ್. ಕೋಟ್ಯಾನ್ ಅವರು ಪ್ರಥಮ ಸ್ಥಾನದೊಂದಿಗೆ 4 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

14 ವರ್ಷದ ವಿಭಾಗದಲ್ಲಿ ನಡೆದ ರಾಜ್ಯ ಮಟ್ಟದ ಶಾಟ್‌ಪುಟ್, 200 ಮೀ. ರನ್ನಿಂಗ್, 80 ಮೀ ಹರ್ಡಲ್ಸ್ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನದೊಂದಿಗೆ 4 ಚಿನ್ನದ ಪದಕ ಗಳಿಸಿದ್ದಾರೆ.

ಗುರುಪುರ ಮರಂಕರಿಯದ ನಿತಿನ್ ಕೋಟ್ಯಾನ್ ಮತ್ತು ತಾರಾ ಎನ್. ಕೋಟ್ಯಾನ್ ದಂಪತಿಯ ಪುತ್ರನಾದ ಇವರು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಮಂಗಳೂರು ದಸರಾ ಕ್ರೀಡೋತ್ಸವದಲ್ಲೂ ಮೂರು ಪದಕ ಗಳಿಸಿದ್ದರು.

Leave a Reply

Your email address will not be published. Required fields are marked *