Breaking
25 Sep 2026, Fri

ಅನುಮತಿಯಿಲ್ಲದೆ ಸರಕಾರಿ ಜಾಗದ ಮರ ಕಡಿಯಲು ಯತ್ನ : ಅರಣ್ಯ ಅಧಿಕಾರಿಗಳಿಂದ ದಾಳಿ

ಬೆಳ್ತಂಗಡಿ : ಸರಕಾರಿ ಜಾಗದಿಂದ ಅನುಮತಿಯಿಲ್ಲದೆ ಮರಗಳನ್ನು ಕಡಿದು ಸಾಗಿಸುವ ವೇಳೆ ವೇಣೂರು ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಮರಮಟ್ಟುಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸವಣಾಲು ಗ್ರಾಮದ ಪಲ್ಲದಡಿಯಲ್ಲಿ ಅ.8 ರಂದು ನಡೆದಿದೆ.

ಸ್ಥಳೀಯ ನಿವಾಸಿ ಬೆನ್ನಿಪ್ರಸಾದ್‌ ಎಂಬುವರು ತನ್ನ ಜಾಗದ ಪಕ್ಕದಲ್ಲಿದ್ದ ಸರಕಾರಿ ಜಾಗದಿಂದ 15 ರಿಂದ 20 ಅಕೇಶಿಯಾ ಹಾಗೂ ಮ್ಯಾಂಜಿಯಮ್‌ ಮರಗಳನ್ನು ಕಡಿಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ವೇಣೂರು ವಲಯ ಅರಣ್ಯಾಧಿಕಾರಿ ಭರತ್‌ ಯು.ಜಿ. ನೇತೃತ್ವದ ತಂಡ ದಾಳಿ ನಡೆಸಿ, ಕಡಿದಿರುವ ಮರಗಳನ್ನು ಹಾಗೂ ಸಾಗಿಸಲು ನಿಲ್ಲಿಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಿಖೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *