ದೆಹಲಿ: ವಾಟ್ಸಾಪ್ ಆ್ಯಪ್ ನಲ್ಲಿ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶವೊಂದನ್ನು ನಂಬಿ ವ್ಯಕ್ತಿಯೋರ್ವರು 97 ಸಾವಿರ ರೂ. ಕಳೆದುಕೊಂಡಿರುವ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ವಿಷ್ಣು ಗಾರ್ಡನ್ ನಿವಾಸಿ ವಿನೋದ್ ಕುಮಾರ್ ಅವರ ಮೊಬೈಲ್ಗೆ ವಾಟ್ಸಾಪ್ನಲ್ಲಿ ಸೆ. 4ರಂದು ಅಪರಿಚಿತ ಸಂಖ್ಯೆಯಿಂದ ಮದುವೆಯ ಆಮಂತ್ರಣ ಪತ್ರಿಕೆಯ ಸಂದೇಶ ಬಂದಿತ್ತು.

ವಿನೋದ್ ಕುಮಾರ್ ಅವರು ಯಾರ ಮದುವೆಯ ಆಮಂತ್ರಣ ಪತ್ರಿಕೆ ಎಂದು ನೋಡಲು ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿದ್ದಾರೆ, ಆಗ ಅವರಿಗೆ ತಿಳಿಯದೇ ಅವರ ಫೋನ್ ಹ್ಯಾಕ್ ಆಗಿದ್ದು, ಏನಾಯಿತು ಎಂದು ಅರಿತುಕೊಳ್ಳುವ ಹೊತ್ತಿಗೆ , ಮೂರು ಅನಧಿಕೃತ ವಹಿವಾಟುಗಳು ನಡೆದಿದ್ದವು ಮತ್ತು ಸೈಬರ್ ಅಪರಾಧಿಗಳು ಅವರ ಬ್ಯಾಂಕ್ ಖಾತೆಯಿಂದ 97 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾರೆ.

ಘಟನೆಯ ಬಳಿಕ ವಿನೋದ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು,ಈ ಬಗ್ಗೆ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




