ಬೈಂದೂರು: ರೈಲ್ವೆ ಬ್ರಿಡ್ಜ್ ಕ್ರಾಸ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ರೈಲು ಬಡಿದು ಮೃತಪಟ್ಟ ಘಟನೆ ಬೈಂದೂರು ಸಮೀಪದ ನಾಗೂರು ಎಂಬಲ್ಲಿ ನಡೆದಿದೆ.
ಹೇರೂರು ನಿವಾಸಿ ದಿವಾಕರ ಆಚಾರ್ಯ (56) ರೈಲು ಬಡಿದು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ವೃತ್ತಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದ ಅವರು ಭಾನುವಾರ ಸಂಜೆ ರೈಲ್ವೆ ಮೇಲ್ ಸೇತುವೆ ಕ್ರಾಸ್ ಮಾಡುತ್ತಿರುವ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




