ಕಾಸರಗೋಡು: ಕುಂಬಳೆಯ ಸೀತಾಂಗೋಳಿ ಪೇಟೆಯಲ್ಲಿ ಮೀನು ವ್ಯಾಪಾರಿಯ ಮೇಲೆ ಚೂರಿ ಇರಿದು ಪರಾರಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಳ ಚೌಕಾರು ನಿವಾಸಿ ಅಕ್ಷಯ್ (34) ಬಂಧಿತ ಆರೋಪಿಯಾಗಿದ್ದಾನೆ.

ಈತ ಭಾನುವಾರದಂದು ರಾತ್ರಿ 12 ಗಂಟೆ ಸುಮಾರಿಗೆ ಸೀತಾಂಗೋಳಿಯಲ್ಲಿ ಈ ಘಟನೆ ನಡೆದಿದ್ದು ಬದಿಯಡ್ಕದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಯಾನೆ ಕುಟ್ಟನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಹಣಕಾಸು ವಿಷಯದಲ್ಲಿ ತಂಡವೊಂದು ಸೀತಾಂಗೋಳಿಯ ಹೋಟೆಲ್ ಒಂದರಲ್ಲಿ ಬಂದು ಅನಿಲ್ ಕುಮಾರ್ ನಿರಂತರ ಕಿರುಕುಳ ನೀಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಅವರು ಸೀತಾಂಗೋಳಿಗೆ ಹೋಗಿದ್ದರು.

ಈ ವೇಳೆ ಕುಟ್ಟ ಬರುವುದನ್ನು ಕಾದು ನಿಂತ ತಂಡ ಆತನ ಕುತ್ತಿಗೆಗೆ ಇರಿದು ಪರಾರಿಯಾಗಿತ್ತು. ಈ ಗಂಭೀರ ಗಾಯಗೊಂಡ ಕುಟ್ಡನಿಗೆ ಸೋಮವಾರ ತುರ್ತು ಶಸ್ತ್ರಕ್ರಿಯೆ ನಡೆಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 13 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಕುಂಬಳೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



