ಕಾಸರಗೋಡು: ಸ್ಕೂಟರ್ ನಿಲ್ಲಿಸುವಾಗ ಮಧ್ಯೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ ಮೃತಪಟ್ಟ ಘಟನೆ ಕಾಸರಗೋಡುವಿನ ನೀರ್ಚಾಲು ಎಂಬಲ್ಲಿ ನಡೆದಿದೆ.
ಉಳಿಯತ್ತಡ್ಕ ಪಳ್ಳಂ ನಿವಾಸಿ ಪ್ರಭಾಕರ- ಅನುಷ ದಂಪತಿಯ ಏಕ ಪುತ್ರ ಪ್ರಣುಷ್(8) ಮೃತಪಟ್ಟ ಬಾಲಕನಾಗಿದ್ದಾನೆ.

ಕಳೆದ ಶುಕ್ರವಾರ ಸಾಯಂಕಾಲ ಬೇಳ ಸಮೀಪದ ಕಟ್ಟತ್ತಂಗಡಿ ತಿರುವು ಬಳಿ ಮುಂಭಾಗದಿಂದ ವಾಹನ ಬರುತ್ತಿರುವುದನ್ನು ಕಂಡು ಬಾಲಕನ ತಂದೆ ಪ್ರಭಾಕರ ಅವರು ಸ್ಕೂಟರನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದು ಈ ವೇಳೆ ಪ್ರಣುಷ್ ರಸ್ತೆಗೆಸೆಯಲ್ಪಟ್ಟನೆನ್ನಲಾಗಿದೆ.

ಈ ವೇಳೆ ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



