ಬಂಟ್ವಾಳ: ಬಂಟ್ವಾಳದ ನದಿ ಕಿನಾರೆಯ ಜ್ಯಾಕ್ ವೆಲ್ ನಲ್ಲಿ ಕೆಸರು ಮತ್ತು ಮರಳು ತೆಗೆಯುವ ಕಾಮಗಾರಿಕೆ ಇರುವುದರಿಂದ ಅ.8 ರಿಂದ 12 ರವರೆಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬೆಳಗ್ಗೆ 8 ರಿಂದ 6 ರ ವರೆಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.





