Breaking
28 Jun 2026, Sun

ಕುಂಬಳೆಯ ಸೀತಂಗೋಳಿಯಲ್ಲಿ ಮೀನು ವ್ಯಾಪಾರಿಗೆ ಚೂರಿ ಇರಿತ, ನಾಲ್ವರು ಆರೋಪಿಗಳ ಬಂಧನ

ಕಾಸರಗೋಡು: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ರಸ್ತೆ ಮಧ್ಯೆ ಮೀನು ವ್ಯಾಪಾರಿಗೆ ಚೂರಿ ಇರಿದು ದುಷ್ಕರ್ಮಿಗಳು ಪರಾರಿಯಾದ ಘಟನೆ ಕುಂಬಳೆಯ ಸೀತಂಗೋಳಿಯಲ್ಲಿ ಭಾನುವಾರ 12 ಗಂಟೆ ರಾತ್ರಿ ಸುಮಾರಿಗೆ ನಡೆದಿದೆ.

ಬದಿಯಡ್ಕದಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದ ಅನಿಲ್ ಕುಮಾರ್ ಅಲಿಯಾಸ್ ಕುಟ್ಟನ್ ಎಂಬತನ ಕುತ್ತಿಗೆಗೆ ಚಾಕು ಇರಿಯಲಾಗಿದೆ.ಅಷ್ಟೇ ಅಲ್ಲದೆ ಚಾಕನ್ನು ಕುತ್ತಿಗೆಯಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಈ ವೇಳೆ ಗಂಭೀರ ಗಾಯಗೊಂಡ ವ್ಯಾಪಾರಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಎರಡು ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *