Breaking
19 Sep 2026, Sat

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಹೇಮಂತ್ ಬಂಧನ

ಬೆಂಗಳೂರು: ಸಿನಿಮಾ ಮಾಡುವುದಾಗಿ ಹೇಳಿ ಕರೆಸಿಕೊಂಡು ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ಯಾಂಡಲ್’ವುಡ್ ನಟ, ನಿರ್ದೇಶಕ ಹೇಮಂತ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ಹೇಮಂತ್ ಅವರನ್ನು ಬಂಧಿಸಿದ್ದು, ನಟಿಗೆ ಮಾಕ್ ಟೇಲ್ ನಲ್ಲಿ ಮದ್ಯ ಬೆರೆಸಿ ಕುಡಿದು ಮತ್ತು ಬರುವಂತೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಿಚ್ಚಿ ಸಿನಿಮಾದಲ್ಲಿ ನಟಿಗೆ ಅವಕಾಶ ನೀಡಿ ಲೈಂಗಿಕ ಕಿರುಕುಳ ನೀಡಿದ್ದು ಅಲ್ಲದೇ ನಟಿಯ ಖಾಸಗಿ ಫೋಟೋ ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ.

ಮುಂಬೈಗೆ ಶೂಟಿಂಗ್ ಹೋಗಿದ್ದಾಗ ಈತ ಅಸಭ್ಯ ವರ್ತನೆ ತೋರಿದ್ದಾನೆ. ಅಲ್ಲದೇ ಅಶ್ಲೀಲ ಬಟ್ಟೆ ತೊಟ್ಟು ನಟಿಸಬೇಕೆಂದು ಕಿರುಕುಳ ನೀಡಿದ್ದಾನೆ.ಲೈಂಗಿಕ ಕಿರುಕುಳ ನೀಡಿ ಸಂಭಾವನೆ ನೀಡದೇ ವಂಚಿಸಿರುವುದಾಗಿ ನಟಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *