Breaking
19 Sep 2026, Sat

ಯಕ್ಷಗಾನ ಕಲಾವಿದ ನೇಣು ಬಿಗಿದು ಆತ್ಮಹತ್ಯೆ

ಬೈಂದೂರು: ಬಡಗುತಿಟ್ಟು ಯಕ್ಷಗಾನ ಕಲಾವಿದರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನಡೆದಿದೆ.

ಕಾಲ್ತೋಡು ಗ್ರಾಮದ ಬಲಗೋಣ ನಿವಾಸಿ, ದಿ.ಕೊಪ್ಪಾಟಿ ಮುತ್ತ ಗೌಡ ಅವರು ಪುತ್ರ ದಾಮೋದರ ಗೌಡ (33) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ಮನೆಮಂದಿ ನೋಡಿದಾಗ ಮಲಗಿಕೊಂಡ ಸ್ಥಳದಲ್ಲಿ ಇರಲಿಲ್ಲ, ಹುಡುಕಾಡಿದಾಗ ಮನೆಯಿಂದ 500 ಮೀ. ದೂರದಲ್ಲಿನ ಮರಕ್ಕೆ ತನ್ನದೇ ಬನಿಯನನ್ನು ಹರಿದು ಹಗ್ಗ ಮಾಡಿಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ದಿನನಿತ್ಯ ದಂಪತಿಯ ನಡುವೆ ಜಗಳ ನಡೆಯುತ್ತಿದ್ದು, ಬೇಸತ್ತ ಪತ್ನಿ ಪ್ರತ್ಯೇಕ ವಾಸಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಜೀವನದಲ್ಲಿ ಜುಗುಪ್ಪೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *