Breaking
22 Sep 2026, Tue

ಅಳದಂಗಡಿಯಲ್ಲಿ ಟೆಂಪೋ ಟ್ರಾವೆಲ್ಲರ್ ಗೆ ಅಡ್ಡ ಬಂದ ಮಹಿಳೆ, ವಾಹನ ಪಲ್ಟಿ

ಬೆಳ್ತಂಗಡಿ: ಮಹಿಳೆಯೊಬ್ಬರು ಅಡ್ಡಬಂದ ಪರಿಣಾಮ ಟೆಂಪೋ ಟ್ರಾವೆಲ್ಲರ್ ವಾಹನ ಪಲ್ಟಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ಅ.4 ರ ಮಧ್ಯಾಹ್ನದ ವೇಳೆ ನಡೆದಿದೆ.

ಕಾರ್ಕಳದ ಕಡೆಯಿಂದ ಗುರುವಾಯನಕೆರೆ ಕಡೆ ಟೆಂಪೋ ಟ್ರಾವೆಲ್ಲರ್ ಬರುತ್ತಿರುವಾಗ ಅಳದಂಗಡಿ ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ಸಡನ್ನಾಗಿ ಅಡ್ಡ ಬಂದಿದ್ದು, ಮಹಿಳೆಯನ್ನು ಬಚಾವ್ ಮಾಡಲೆತ್ನಿಸಿ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ.

ಮಹಿಳೆಗೆ ಸಣ್ಣ ಪ್ರಮಾಣದ ಗಾಯಾಳಾಗಿದೆ ಎಂದು ತಿಳಿದು ಬಂದಿದೆ.

ಪಲ್ಟಿಯಾದ ವಾಹನದಲ್ಲಿ ಪ್ರಯಾಣಿಕರಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *