Breaking
23 Jun 2026, Tue

ಅಮ್ಮೂರು ಕ್ರಾಸ್ ನಲ್ಲಿ ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ , ವ್ಯಕ್ತಿ ಸಾವು

ಬಂಟ್ವಾಳ: ರಸ್ತೆ ದಾಟುವ ವೇಳೆ ರಿಕ್ಷಾ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅಮ್ಮೂರು ಕ್ರಾಸ್ ನಲ್ಲಿ ನಡೆದಿದೆ.

ಮೃತರನ್ನು ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಲೋಕೇಶ್ ಮೂಲ್ಯ (44) ಎಂದು ಗುರುತಿಸಲಾಗಿದೆ.

ಲೋಕೇಶ್ ಅವರು ಕಲ್ಲಡ್ಕದ ನಾಯರ ಪೆಟ್ರೋಲ್ ಪಂಪ್ ನ ಮುಂಭಾಗದಲ್ಲಿ ರಸ್ತೆಯನ್ನು ದಾಟುವ ವೇಳೆ ಅತೀ ವೇಗದಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ಕಳೆದುಕೊಂಡು ಬಳಿಕ ಪಲ್ಟಿಯಾಗಿದೆ.

ಈ ವೇಳೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ರಿಕ್ಷಾದಲ್ಲಿ ಚಾಲಕನ ಪತ್ನಿ ಮಕ್ಕಳು ಹಾಗೂ ಮಾವ ಪ್ರಯಾಣಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಹಾಗೂ ಎರಡು ಮಕ್ಕಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *