ಕಾಸರಗೋಡು: ಮನೆಯ ಬಾಗಿಲು ಮುರಿದು 5 ಪವನ್ ಚಿನ್ನಾಭರಣ, ಬೆಲೆ ಬಾಳುವ ವಾಚು ಸಹಿತ ಕಳವುಗೈದ ಘಟನೆ ಕಾಸರಗೋಡುವಿನ ಮುಳ್ಳೇರಿಯಾದ ಬೋವಿಕಾನ ಮೂಲಡ್ಕ ಎಂಬಲ್ಲಿ ಅ.1 ರಂದು ನಡೆದಿದೆ.
ಮೂಲಡ್ಕ ಕಾವುಪಡು ನಿವಾಸಿ, ಗಲ್ಫ್ ಉದ್ಯೋಗಿಯಾಗಿರುವ ಅಬ್ದುಲ್ ಖಾದರ್ ಅವರ ಮನೆಯಲ್ಲಿ ದರೋಡೆ ನಡೆದಿದೆ.

ಅಬ್ದುಲ್ ಅವರ ಪತ್ನಿ ಹಾಗೂ ಮಕ್ಕಳು ಚೌಕಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಪರಿಸರದಲ್ಲಿರುವ ಸಂಬಂಧಿಕರು ಮನೆಯ ಬಾಗಿಲು ಒಡೆದಿರುವುದನ್ನು ಕಂಡು ಮಾಹಿತಿ ನೀಡಿದ್ದಾರೆ.
ಆದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



