Breaking
25 Sep 2026, Fri

ಮಲ್ಪೆ ಬಂದರಿನ ಧಕ್ಕೆಗೆ ಬಿದ್ದು ಮೀನುಗಾರನ ದುರಂತ ಅಂತ್ಯ

ಉಡುಪಿ: ಮಲ್ಪೆ ಬಂದರಿನ ಧಕ್ಕೆಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಓರಿಸ್ಸಾದ ಮನಧಾರ ಮುಂಡಾ (30) ಎಂದು ಗುರುತಿಸಲಾಗಿದೆ.

ಮುಂಡಾ ಅವರು ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿ ಕೊಂಡಿದ್ದು ಸೆ.28ರಂದು ರಾತ್ರಿ ಅಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಸೆ.30ರಂದು ಬೆಳಗ್ಗೆ ಬಂದರಿನ ಸಿಎಸ್ಪಿ ಕಛೇರಿ ಎದುರು ದಕ್ಕೆಯ ನೀರಿನಲ್ಲಿ ಮುಂಡಾ ಅವರ ಮೃತದೇಹ ಪತ್ತೆಯಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *