ವಿಟ್ಲ: ಕಳೆಂಜಿಮಲೆ ಮೀಸಲು ಅರಣ್ಯದಲ್ಲಿ ಹಾಲುಮಡ್ಡಿ ಮರಗಳಿಂದ ಮೇಣವನ್ನು ಸಂಗ್ರಹ ಮಾಡಿಕೊಂಡು ಸಾಗಾಟ ಮಾಡುವ ಸಂದರ್ಭದಲ್ಲಿ ನಾಲ್ಕು ಜನ ಆರೋಪಿಗಳ ಜೊತೆಗೆ ಆಟೋ ಹಾಗೂ ಹಾಲುಮಡ್ಡಿ ಮೇಣವನ್ನ ಪತ್ತೆ ಮಾಡಿ ಅರಣ್ಯಧಿಕಾರಿಗಳು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಹಾಗೂ ಪುತ್ತೂರು ವಲಯದ ವಲಯ ಅರಣ್ಯಾಧಿಕಾರಿಯವರು, ವಿಟ್ಲ ಶಾಖೆಯ ಉಪವಲಯ ಅರಣ್ಯ ಅಧಿಕಾರಿಗಳು ಹಾಗೂ ಕಳೆಂಜಿ ಮಲೆ ಪೂರ್ವ ಗಸ್ತಿನ ಅರಣ್ಯ ರಕ್ಷಕರು ಹಾಗೂ ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ.