Breaking
20 Jun 2026, Sat

10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಳ್ತಂಗಡಿ: ಕಳ್ಳತನ ಪ್ರಕರಣಕ್ಕೆ ಸಂಬಂಧಸಿದಂತೆ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ನಿವಾಸಿ ವೀರಪ್ಪ ಗೌಡ ಎಂಬವರ ಪುತ್ರ ತಮ್ಮಯ್ಯ(35) ಎಂದು ಗುರುತಿಸಲಾಗಿದೆ.

ಸೆ. 28 ರಂದು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಿಸಿದಾಗ ಅವರು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬಿದ್ರೆ ನಿವಾಸಿ ಎಂದು ಹೇಳಿದ ಬಳಿಕ ಸುರತ್ಕಲ್ ಪೊಲೀಸ್ ಠಾಣೆಯವರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದರು.ಳ ನಂತರ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ತನಿಖೆ ನಡೆಸಿದಾಗ ನೆರಿಯ ಪೆಟ್ರೋನೆಟ್ ಪೈಪ್‌ ಲೈನ್ ನಿಂದ 2010 ರಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ತಮ್ಮಯ್ಯ ಎಂದು ತಿಳಿದುಬಂದಿದೆ.

ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ಉಪ ನೀರಿಕ್ಷಕ ಸಮರ್ಥ್ ಆರ್. ಗಾಣಿಗೇರವರ ಮಾರ್ಗದರ್ಶನದಲ್ಲಿ ಸಿಬಂದಿ ವ್ರಷಭ, ಚರಣ್ ರಾಜ್, ಗೋವಿಂದರಾಜ್, ಜಗದೀಶ್ ರವರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *