ಬೆಂಗಳೂರು : ಖ್ಯಾತ ಕನ್ನಡ ರಂಗಭೂಮಿ ನಟ, ಯಶವಂತ ಸರದೇಶಪಾಂಡೆ ಅವರು ಸೆ.29ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಪಾತ್ರವಹಿಸಿ ಜನಪ್ರಿಯರಾಗಿದ್ದ ಇವರು ದೇಶ-ವಿದೇಶಗಳಲ್ಲಿಯೂ ನಾಟಕಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿದ್ದು, ಹಾಸ್ಯ ಪಾತ್ರಗಳ ಮೂಲಕವೇ ಹೆಚ್ಚಾಗಿ ಗುರುತಿಸಿಕೊಂಡು ಜನಮೆಚ್ಚುಗೆ ಪಡೆದಿದ್ದರು.

ಇವರ ಅಗಲುವಿಕೆಗೆ ಅನೇಕ ಕಲಾವಿದರು, ಕಲಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.




